NFSM (National Food Security Mission) Recruitment 2020
ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿಯಲ್ಲಿ(ಎನ್.ಎಫ್.ಎಸ್.ಎಮ್) ಖಾಲಿ ಇರುವ ಈ ಕೆಳಗೆ ತಿಳಿಸಿದ ಹುದ್ದೆಗಳ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬೆಕು.
ಹುದ್ದೆಯ ವಿವರ
ಜಿಲ್ಲಾ ಸಲಹೆಗಾರರು -01
ತಾಂತ್ರಿಕ ಸಹಾಯಕರು -02
ಒಟ್ಟು ಹುದ್ದೆಗಳು: 3
ಮೇಲ್ಕಂಡ ಹುದ್ದೆಗಳಿಗೆ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು “ಜಂಟಿ ಕೃಷಿ ನಿರ್ದೇಶಕರು, ತುಮಕೂರು” ಇವರ ಕಚೇರಿಯಿಂದ ದಿನಾಂಕ : 10-09-2020 ರೊಳಗೆ ಕಚೇರಿ ಸಮಯದಲ್ಲಿ ಪಡೆಯಬಹುದಾಗಿರುತ್ತದೆ. ನಂತರ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ದಿನಾಂಕ : 14-09-2020 ರೊಳಗಾಗಿ ಜಂಟಿ ಕೃಷಿ ನಿರ್ದೇಶಕರು, ತುಮಕೂರು ರವರಿಗೆ ನೇರವಾಗಿ ಅಥವಾ ಅಂಚೆ ಮುಖಾಂತರ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಹತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು BSc (ಅಗ್ರಿ) / Msc (ಅಗ್ರಿ) ಪದವಿಯ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
ಪ್ರಮುಖ ದಿನಾಂಕಗಳು
Application Start Date: 3 ಸೆಪ್ಟೆಂಬರ್ 2020
Application End Date: 14 ಸೆಪ್ಟೆಂಬರ್ 2020
ಪ್ರಮುಖ ಲಿಂಕುಗಳು