ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಹೆಡ್‌ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ (IA)

 

ಕೇಂದ್ರದ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಹೆಡ್‌ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳು ಗ್ರೂಪ್‌ ಸಿ ನಾನ್‌ ಗೆಜೆಟೆಡ್ ಮಿನಿಸ್ಟೇರಿಯಲ್ ಪೋಸ್ಟ್‌ಗಳಾಗಿವೆ. ಎಸ್‌ಎಸ್‌ಬಿ’ಯು ಈ ನೇಮಕಾತಿ ಪ್ರಕ್ರಿಯೆ ಮೂಲಕ ಒಟ್ಟು 115 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ ಎಸ್‌ಎಸ್‌ಬಿ.

ಹುದ್ದೆಯ ಹೆಸರು: ಹೆಡ್‌ ಕಾನ್ಸ್‌ಟೇಬಲ್
ಹುದ್ದೆಗಳ ಸಂಖ್ಯೆ : 115
ವಿದ್ಯಾರ್ಹತೆ: 12ನೇ ತರಗತಿ ಪಾಸ್‌.

ಸಶಸ್ತ್ರ ಸೀಮಾ ಬಲ ಹೆಡ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ 12ನೇ ತರಗತಿ (ದ್ವಿತೀಯ ಪಿಯು) ಪಾಸ್‌ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಅರ್ಹತೆಗಳು: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.

ವೇತನ ಶ್ರೇಣಿ: ಹೆಡ್‌ ಕಾನ್ಸ್‌ಟೇಬಲ್‌ ಹುದ್ದೆಗಳ ಅಭ್ಯರ್ಥಿಗಳಿಗೆ ರೂ.25,500 ದಿಂದ ರೂ.81,110 ವರೆಗೆ ಮಾಸಿಕ ನೀಡಲಾಗುತ್ತದೆ.

ಅರ್ಜಿ ಶುಲ್ಕ: ರೂ.100 ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜಾಹಿರಾತು ಪ್ರಕಟವಾದ ದಿನದಿಂದ 30 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು.

Website 
Notification 
close button