ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಪಂಚಾಯತ್ ನೇಮಕಾತಿ ಅಧಿಸೂಚನೆ 2022 | Zilla Panchayat Recruitment 2022

ಧಾರವಾಡ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ 2022

ಧಾರವಾಡ ಜಿಲ್ಲಾ ಪಂಚಾಯತ್ ಪ್ರಧಾನ ಕಛೇರಿಯಲ್ಲಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಅಳ್ನಾವರ ಮತ್ತು ಅಣ್ಣಿಗೇರಿ ತಾಲೂಕು ಪಂಚಾಯತಿಗಳಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

ಇಲಾಖೆ ಹೆಸರು:ಧಾರವಾಡ ಜಿಲ್ಲಾ ಪಂಚಾಯತ್
ಹುದ್ದೆಗಳ ಹೆಸರು:ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು 15
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ ಮೂಲಕ 
ಉದ್ಯೋಗ ಸ್ಥಳ ಧಾರವಾಡ 


ಹುದ್ದೆಗಳ ವಿವರ

1) ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ (ಎಡಿಪಿಸಿ)  : 01 ಹುದ್ದೆ
ವಿದ್ಯಾರ್ಹತೆ
ಬಿಇ/ಬಿ.ಟೆಕ್ ಅಥವಾ ಎಂಬಿಎ ಅಥವಾ ಸ್ನಾತಕೋತ್ತರ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

2) ಜಿಲ್ಲಾ ಐ.ಇ.ಸಿ. ಸಂಯೋಜಕರು (ಡಿಐಇಸಿ) : 01 ಹುದ್ದೆ
ವಿದ್ಯಾರ್ಹತೆ
ಸ್ನಾತಕೋತ್ತರ ಪದವಿ (ಮಾಸ್ ಕಮ್ಯುನಿಕೇಷನ್) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

3) ತಾಲೂಕಾ ಎಂ.ಐ.ಎಸ್. ಸಂಯೋಜಕರು (ಟಿಐಎಂಎಸ್) : 03 ಹುದ್ದೆ
ವಿದ್ಯಾರ್ಹತೆ
ಬಿಸಿಎ/ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್)(ಕನಿಷ್ಠ 45% ಅಂಕಗಳೊಂದಿಗೆ) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಉದ್ಯೋಗ ಸುದ್ದಿ: ಕರ್ನಾಟಕ ಹಾಲು ಒಕ್ಕೂಟ ನೇಮಕಾತಿ ಅಧಿಸೂಚನೆ 2022

4) ತಾಲೂಕ ಐ.ಇ.ಸಿ. ಸಂಯೋಜಕರು (ಟಿಐಇಸಿ): 02 ಹುದ್ದೆ
ವಿದ್ಯಾರ್ಹತೆ
ಪದವಿ (ಮಾಸ್ ಕಮ್ಯುನಿಕೇಷನ್) ಶೈಕ್ಷಣಿಕ ಅರ್ಹತೆ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.


5) ತಾಲೂಕಾ ಸಂಯೋಜಕರು (ಟಿಸಿ) : 02 ಹುದ್ದೆ
ವಿದ್ಯಾರ್ಹತೆ
ಬಿಇ/ ಬಿ.ಟೆಕ್ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು

6) ಡಾಟಾ ಎಂಟ್ರಿ ಆಪರೇಟರ್  : 02 ಹುದ್ದೆ
ವಿದ್ಯಾರ್ಹತೆ
ದ್ವಿತೀಯ ಪಿಯುಸಿ ಜೊತೆಗೆ 01 ವರ್ಷದ ಕಂಪ್ಯೂಟರ್ ಜ್ಞಾನ ಪ್ರಮಾಣ ಪತ್ರ ಹೊಂದಿರಬೇಕು

7) ತಾಂತ್ರಿಕ ಸಹಾಯಕರು (ಕೃಷಿ) : 01 ಹುದ್ದೆ
ವಿದ್ಯಾರ್ಹತೆ
ಬಿ.ಎಸ್ಸಿ (ಕೃಷಿ) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

8) ತಾಂತ್ರಿಕ ಸಹಾಯಕರು (ಅರಣ್ಯ) : 02 ಹುದ್ದೆ
ವಿದ್ಯಾರ್ಹತೆ
ಬಿ.ಎಸ್ಸಿ (ಅರಣ್ಯ) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಉದ್ಯೋಗ ಸುದ್ದಿ: ಬೆಂಗಳೂರು ರೈಲ್ವೆ ನೇಮಕಾತಿ ಅಧಿಸೂಚನೆ 2022

9) ತಾಲೂಕಾ ತಾಂತ್ರಿಕ ಸಹಾಯಕರು  : 01 ಹುದ್ದೆ
ವಿದ್ಯಾರ್ಹತೆ
ಬಿಇ/ ಬಿ.ಟೆಕ್ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ವಯೋಮಿತಿ:
ಧಾರವಾಡ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ ಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ, ಗರಿಷ್ಠ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.

ವೇತನಶ್ರೇಣಿ:
ಧಾರವಾಡ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 16,000 ರಿಂದ ರೂ. 38,000 ವರೆಗೂ ಸಂಭಾವನೆ ನೀಡಲಾಗುವುದು

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ವಿಧಾನ 
ಧಾರವಾಡ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ ದಾಖಲಾತಿ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲು ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅನುಭವವನ್ನು ಪರಿಗಣಿಸಿ ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ಮಾನದಂಡಗಳಲ್ಲಿ ಮೆರಿಟ್ ಪಟ್ಟಿ ತಯಾರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ನೋಡಿ

ಅನುಭವ:
ಆಯಾ ಹುದ್ದೆಗಳಿಗೆ ಕನಿಷ್ಠ 3 ರಿಂದ 5 ವರ್ಷ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಜನವರಿ 24, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 10, 2022
  
ಪ್ರಮುಖ ಲಿಂಕುಗಳು 
ವೆಬ್ಸೈಟ್ Click Here 
ನೋಟಿಫಿಕೇಶನ್ Click Here 
ಅರ್ಜಿ ಲಿಂಕ್ Click Here 

close button